ಪರಮವೀರ ಚಕ್ರ -
ಸಮರ ಕಾರ್ಯಾಚರಣೆಯಲ್ಲಿ ವೀರಾವೇಶ, ಶೌರ್ಯ, ಪರಾಕ್ರಮ ಸಹಿತ ಹೋರಾಡಿ ಶತ್ರು ಮುನ್ನಡೆಯನ್ನು ತಡೆದು ಹಿಮ್ಮೆಟ್ಟಿಸಿ, ಜೀವಂತವಾಗಿ ಮರಳುವ ಇಲ್ಲವೆ ರಣರಂಗದಲ್ಲಿ ಮಡಿಯುವ ಭಟನಿಗೆ ಅವನ ಸಾಹಸವನ್ನು ಗುರುತಿಸಿ ಭಾರತ ಸರ್ಕಾರ ನೀಡುವ ಅತ್ಯಂತ ಉನ್ನತ ಗೌರವ. ಇದರ ಪ್ರತೀಕವಾಗಿ ದುಂಡನೆಯ ಆಕಾರದ ಕಂಚಿನ ಪದಕವನ್ನು, ಸಾಮಾನ್ಯವಾಗಿ, ರಾಷ್ಟ್ರೋತ್ಸವದ ದಿವಸಗಳಂದು ಜರಗುವ ವಿಶೇಷ ಸಮಾರಂಭಗಳಲ್ಲಿ ನೀಡುತ್ತಾರೆ. ಗತಿಸಿದವನ ಪರವಾಗಿ ಮರಣೋತ್ತರ ಗೌರವವನ್ನು ಆತನ ಸಮೀಪ ಸಂಬಂಧಿಗೆ ಕೊಡುತ್ತಾರೆ. ಈ ಗೌರವ ಸಂದವನಿಗೆ ವಿಶೇಷ ಮಾಸಾಶನ ನೀಡಲಾಗುತ್ತದೆ.

ಪರಮವೀರ ಚಕ್ರ ಪದವಿ ಪಡೆದ ವೀರ ಯೋಧರು :
1. ಮೇಜರ್ ಸೋಮನಾಥ್ ಶರ್ಮಾ, ಕುಮಾಂವ್ ರೆಜಿಮೆಂಟ್ ನವೆಂಬರ್
  1947. ಕಾಶ್ಮೀರ ಕಾರ್ಯಾಚರಣೆ - 1947-48, ಮರಣೋತ್ತರ. 

2. ಸೆಕೆಂಡ್ ಲೆಫ್ಟಿನೆಂಟ್ ರಾಮ್‍ರಘೋಬಾರಾಣೆ, ಚೋರ್ ಆಫ್ ಇಂಜಿನಿಯರ್ಸ್
  ಎಪ್ರಿಲ್ - 1998 ಕಾಶ್ಮೀರ ಕಾರ್ಯಾಚರಣೆ - 1947-48.

3. ಕಂಪನಿ ಹವಿಲ್ದಾರ ಮೇಜರ್ ಪಿರೂಸಿಂಗ್, ರಜಪೂತಾನ ರೈಫಲ್ಸ್ ಜುಲೈ
  1948 (ಕಾಶ್ಮೀರ ಕಾರ್ಯಾಚರಣೆ - 1947-48) ಮರಣೋತ್ತರ.

4. ಲ್ಯಾನ್ಸ್‍ನಾಯಕ್ ಕರಮ್‍ಸಿಂಗ್, ಸಿಖ್ ರೆಜಿಮೆಂಟ್ ಅಕ್ಟೋಬರ್ - 1948
  ಕಾಶ್ಮೀರ ಕಾರ್ಯಾಚರಣೆ - 1947-48.

5. ನಾಯಕ್ ಜಾದುನಾಥ್‍ಸಿಂಗ್, ರಜಪೂತಾನ ರೈಫಲ್ಸ್ ಡಿಸೆಂಬರ್ - 1948
  ಕಾಶ್ಮೀರ ಕಾರ್ಯಾಚರಣೆ, ಮರಣೋತ್ತರ. 

6. ಕ್ಯಾಪ್ಟನ್ ಗುರುಬಚನ್‍ಸಿಂಗ್ ಸಲಾರಿಯಾ, ಗೂರ್ಖಾ ರೈಫಲ್ಸ್ ಡಿಸೆಂಬರ್ - 1961
  ಕಾಂಗೊ ಕಾರ್ಯಾಚರಣೆ, ಮರಣೋತ್ತರ.

7. ಮೇಜರ್ ಧನ್‍ಸಿಂಗ್ ಥಾಪಾ, ಗೂರ್ಖಾ ರೈಫಲ್ಸ್ ಅಕ್ಟೋಬರ್ - 1962
  ಲಡಾಕ್ ಕಾರ್ಯಾಚರಣೆ,

8. ಸುಬೇದಾರ್ ಜೊಗಿಂದರ್‍ಸಿಂಗ್, ಸಿಕ್‍ರೆಜಿಮೆಂಟ್ ಅಕ್ಟೋಬರ್ - 1962
  ನೇಫಾ ಕಾರ್ಯಾಚರಣೆ, ಮರಣೋತ್ತರ.

9. ಮೇಜರ್ ಶೈತಾನ್‍ಸಿಂಗ್, ಕುಮಾಂವ್ ರೆಜಿಮೆಂಟ್ ನವೆಂಬರ್ - 1962
  ಲಡಾಕ್ ಕಾರ್ಯಾಚರಣೆ, ಮರಣೋತ್ತರ. 

10. ಕಂಪನಿ ಕ್ವಾರ್ಟರ್ ಮಾಸ್ಟರ್ ಹವಲ್ದಾರ್ ಅಬ್ದುಲ್ ಹಮಿದ್, ಗ್ರೆನೇಡಿಯರ್ಸ್
  ಸಪ್ಟೆಂಬರ್ - 1965, ಪಾಕಿಸ್ತಾನ್ ವಿರುದ್ಧದ ಯುದ್ಧ, ಮರಣೋತ್ತರ.

11. ಲೆಫ್ಟಿನಂಟ್ ಕರ್ನಲ್ ಏ. ಬಿ. ತಾರಾಪೂರ್, 17 ಪೂನಾಹಾರ್ಸ್
  ಸಪ್ಟೆಂಬರ್ - 1965, ಪಾಕ್ ಯುದ್ಧ, ಮರಣೋತ್ತರ.

12. ಮೇಜರ್ ಹೋಷಿಯಾರ್‍ಸಿಂಗ್, ಗ್ರೆನೇಡಿಯರ್ಸ್
  ಡಿಸೆಂಬರ್ - 1971, ಭಾರತ ಪಾಕ್ ಯುದ್ಧ, ಮರಣೋತ್ತರ.

13. ಸೆಕೆಂಡ್ ಲೆಫ್ಟಿನಂಟ್ ಅರುಣ್ ಖೇತ್ರಿಪಾಲ್, 17 ಪೂನಾಹಾರ್ಸ್
  ಡಿಸೆಂಬರ್ - 1971 ಭಾರತ ಪಾಕ್ ಯುದ್ಧ, ಮರಣೋತ್ತರ.

14. ಲ್ಯಾನ್ಸ್‍ನಾಯಕ್ ಅಲ್ಬರ್ಟ್‍ಎಕ್ಕಾ, ಬ್ರಿಗೇಡ್ ಆಫ್ ಗಾಡ್ರ್ಸ,
  ಡಿಸೆಂಬರ್ - 1971 ಭಾರತ ಪಾಕ್ ಯುದ್ಧ, ಮರಣೋತ್ತರ.

15. ಫ್ಲೈಯಿಂಗ್ ಆಫಿಸರ್ ನಿರ್ಮಲ್‍ಜಿತ್‍ಸಿಂಗ್ ಶೇಖಾನ್, (ಪೈಲಟ್), ಫ್ಲೈಯಿಂಗ್ 
  ಬ್ರಾಂಚ್, ಡಿಸೆಂಬರ್ - 1971, ಇಂಡೋ ಪಾಕ್ ಯುದ್ಧ, ಮರಣೋತ್ತರ.

16. ನಾಯಕ್ ಸುಬೇದಾರ್ ಬನ ಸಿಂಗ್, ಜೆ ಅಂಡ್ ಕೆ ಲೈಟ್ ಇನ್‍ಫ್ಯಾಂಟ್ರಿ
  ಜೂನ್ - 1987, ಸಿಯಾಚಿನ್ ಗ್ಲೇಸಿಯರ್ ಕಾರ್ಯಾಚರಣೆ. 

17. ಮೇಜರ್ ರಾಮಸ್ವಾಮಿ ಪರಮೇಶ್ವರನ್, ಮಹಾರ್ ರೆಜಿಮೆಂಟ್
  ನವೆಂಬರ್ - 1987, ಶ್ರೀಲಂಕಾ ಕಾರ್ಯಾಚರಣೆ, ಮರಣೋತ್ತರ.

18. ರೈಫಲ್‍ಮನ್ ಸಂಜಯ್‍ಕುಮಾರ್, ರಾಜ್‍ಪುತಾನ ರೈಫಲ್ಸ್, ಜನವರಿ 2000
  ಕಾರ್ಗಿಲ್ ಕಾರ್ಯಾಚರಣೆ 1999.

19. ಯೋಗೀಂದರ್‍ಸಿಂಗ್ ಯಾದವ್, 18 ಗ್ರೆನೇಡಿಯರ್ಸ್, ಜನವರಿ 2000
  ಕಾರ್ಗಿಲ್ ಕಾರ್ಯಾಚರಣೆ 1999.

20. ಕ್ಯಾಪ್ಟನ್ ಮನೋಜ್ ಪಾಂಡೆ, ಗೂರ್ಖಾ ರೆಜಿಮೆಂಟ್, ಜನವರಿ 2000
  ಕಾರ್ಗಿಲ್ 1999, ಮರಣೋತ್ತರ.

21. ಕ್ಯಾಪ್ಟನ್ ವಿಕ್ರಮ್ ಭಾತ್ರಾ, ಗೂರ್ಖಾ ರೆಜಿಮೆಂಟ್, ಜನವರಿ 2000
  ಕಾರ್ಗಿಲ್ 1999, ಮರಣೋತ್ತರ.							(ಹೆಚ್.ಕೆ.ಬಾಲಸೂರಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ